ಗೌತಮ ಕ್ಷೇತ್ರ [ ಚಿತ್ರ ಸೌಜನ್ಯ ಗೂಗಲ್ ಮ್ಯಾಪ್ ] |
ಶ್ರೀ ರಂಗ ಪಟ್ಟಣ ದ್ವೀಪಕ್ಕೆ ಸಂಭಂದಿಸಿದಂತೆ ಹಲವಾರು ದಂತ ಕತೆಗಳಿದ್ದು ಎಲ್ಲಾ ಕಥೆಗಳಿಗೆ ಇಂದಿನ ನಾವುಗಳು ಬಯಸುವಂತೆ ದಾಖಲೆಗಳ ಆಧಾರ ವಿಲ್ಲ ಆದಾಗ್ಯೂ ಕಥೆಗಳಿಗೆ ಆಧಾರವಾಗಿ ಎಂಬಂತೆ ಕೆಲವು ಕುರುಹುಗಳು ಹಾಗೂ ಪ್ರಾಚ್ಯ ವಸ್ತು/ದಾಖಲೆ ಸಂಗ್ರಹಾಲಯ ದಲ್ಲಿ ಕೆಲವು ದಾಖಲೆಗಳು ಕಂಡುಬರುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋದನೆ ಮಾಡುವ ಅಗತ್ಯ ವಿದ್ದು ನಮ್ಮಲ್ಲಿ ಇಂತಹ ವಿಚಾರಗಳಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಲಭ್ಯವಿರುವ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ.ಶ್ರೀ ರಂಗಪಟ್ಟಣ ದ್ವೀಪವನ್ನು "ಗೌತಮಕ್ಷೇತ್ರ" ವೆಂದೂ "ಗೌತಮ ರಂಗನಾಥ ಸನ್ನಿಧಿ" ಎಂದೂ ಕರೆಯುವುದು ವಾಡಿಕೆ .ಇದು ಹಿಂದಿನ ಹಲವು ಶತಮಾನಗಳಿಂದ ಬೆಳೆದು ಬಂದಿದೆ.ಇದಕ್ಕೆ ಪುಷ್ಟಿ ಕೊಡಲೇನೋ ಎಂಬಂತೆ ಶ್ರೀ ರಂಗನಾಥನ ಸನ್ನಿಧಿ ಯಲ್ಲಿ ಗೌತಮ ಋಷಿಗಳ ಮೂರ್ತಿಯೂ ಸಹ ಇದೆ
ದಾಖಲೆ |
ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮಕ್ಕೆ ಕಾವೇರಿ ಮಡಿಲಲ್ಲಿ ಗೌತಮ ಕ್ಷೇತ್ರ ಎಂಬ ಹೆಸರಿನ ಮತ್ತೊಂದು ದ್ವೀಪ ವಿದೆ. ಅಲ್ಲಿ ಗೌತಮ ಮುನಿಗಳು ತಪ್ಪಸ್ಸು ಮಾಡಿದರೆಂದೂ ಹೇಳುವ ಜಾಗದಲ್ಲಿ ಒಂದು ಮಂದಿರವಿದ್ದು ಅಲ್ಲಿ ಹಲವಾರು ಮುನಿಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ .ಬಿ.ಎಲ್. ರೈಸ್ ರವರ ಎಪಿಗ್ರಾಫಿಯ ದಲ್ಲಿ ಈ ಬಗ್ಗೆ ಉಲ್ಲೇಖವಿದ್ದು ಈ ಮಂಟಪದ ಒಂದು ಬಂಡೆಯ ಮೇಲೆ ಈ
"ಗೌತಮ ಮುನಿಯಿ....... ಹ......ತೀರ್ತ ಎಂದೂ ಪಶ್ಚಿಮ ರಂಗನಾಥನ ಸಾಯುಜ್ಯವಹುದು"
ಎಂದು ಬರೆಯಲಾಗಿದೆ.ದೇವಾಲಯದ .ಅಂದರೆ ಶ್ರೀ ರಂಗನಾಥನ ದೇವಾಲಯದ ಉತ್ತರ ಗೋಡೆಯ ಕಲ್ಲಿನಲ್ಲಿನ ಒಂದು ಶಾಸನದಲ್ಲಿ
"ಕಾವೇರಿ ವನ ಮಧ್ಯ ದೇಶೆ ವಿಲ [ಸ ].ತ್ ಶ್ರೀ ರಂಗ ಪಟ್ಟಣಾ ಭಿದೇ. ವೈಕುಂಟೆ ಮುನಿ ಗೌತಮಸ್ಯ ತಪಸಾ ಹೃಷ್ಟಹ ಪುರಾಣಹ ಪುಮಾನ್"
ಎಂದು ಹೇಳಿ ಗೌತಮ ಋಷಿಯ ತಪಸನ್ನು ಸ್ಮರಿಸಲಾಗಿದೆ ಹಾಗು ಶ್ರೀ ರಂಗನಾಥನಿಗೂ ಹಾಗೂ ಗೌತಮ ಋಷಿಗೂ ಇರುವ ಸಂಬಂಧ ತಿಳಿಸಲಾಗಿದೆ.ಇದು ಗೌತಮ ಹಾಗೂ ಶ್ರೀ ರಂಗ ಪಟ್ಟಣದ ಕ್ಷೇತ್ರ ವಿಷಯವಾದರೆ.ಮುಂದುವರೆದು ಇನ್ನೊಂದು ಕಥೆ ನೋಡಿ!!!
ಇನ್ನೊಂದು ವಿಚಾರ ಶ್ರೀ ರಂಗ ಪಟ್ಟಣ ದ ಚರಿತೆಯದು ಈ ದಾಖಲೆಯಲ್ಲಿ ಶ್ರೀ ರಂಗ ಪಟ್ಟಣ ದ್ವೀಪ ಸಮುಚ್ಚಯ ಮೂರು ಹಳ್ಳಿ ಗಳಿಂದ ಕೂಡಿತ್ತೆಂದೂ ಹಂಗರಹಳ್ಳಿ, ಹೊಸಳ್ಳಿ ಹಾಗೂ ಧ್ರುವ ಎಂಬ ಮೂರು ಹಳ್ಳಿ ಗಳು ಸೇರಿದ್ದವೆಂದೂ ಒಂದು ದಿನ ಹಂಗರ ಹಳ್ಳಿಯ ಒಬ್ಬ ಹೆಂಗಸಿಗೆ ಸೇರಿದ ಹಸು ತನ್ನ ಹಾಲನ್ನು ಕಾಡಿನಲ್ಲಿದ್ದ ಒಂದು ಹುತ್ತಕ್ಕೆ ಧಾರೆ ಹರಿಸಿದ ಕಾರಣ ಆ ಜಾಗದಲ್ಲಿ ಅಗೆದಾಗ ಶ್ರೀ ರಂಗ ನಾಥನ ಮೂರ್ತಿ ಹೊರ ಬಂದಿತೆಂದೂ ಹೇಳಲಾಗಿದೆ, ನಂತರ ಹಸುವಿನ ಒಡತಿ ಈ ಮೂರ್ತಿಗೆ ಮರದಿಂದ ಒಂದು ಆಕೃತಿ ನಿರ್ಮಿಸಿ ಸೂರು ಕಲ್ಪಿಸಿದಳೆಂದು ತಿಳಿಸಲಾಗಿದೆ.. ಇದಕ್ಕೆ ಆಧಾರವಾಗಿ ಪ್ರಹ್ಲಾದ ಚರಿತೆ ಯನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ದಾಖಲೆ ಚಿತ್ರವನ್ನು ಕೆಳಗಡೆ ನೋಡಬಹುದಾಗಿದೆ.
ಶ್ರೀ ರಂಗ ಪಟ್ಟಣ ಚರಿತೆ ಬಗ್ಗೆ ದಾಖಲೆ |